Tuesday 3 July 2012

ನಾನು ನನ್ನ ಕವನ ***** ಮುಂದುವರೆದ ಭಾಗ [2]..... >>>>> :)




ನಾನು ನನ್ನ ಕವನ 
****************************************
ಮುಂದುವರೆದ ಭಾಗ.....[2] >>>>>>> :)


            ಅವಳ ಮಾತುಗಳು ಮೆಲ್ಲಮೆಲ್ಲನೇ ನನ್ನ ಕಿವಿಗಳನ್ನು ಸೋಕಿದಾಕ್ಷಣ ನಾನು ನನ್ನನ್ನೇ ಮರೆತಂತಾಗಿ , ಹಳೆಯ ಆ ದಿನಗಳು ಕಣ್ಣೆದುರಲ್ಲೇ ಬಂದು ನಿಂತಂತೆ , ಅದೆಷ್ಟು ನೈಜ ಕಲ್ಪನೆ ... ಹಾಗೆಯೇ ಅವಳ ಮಾತುಗಳಲ್ಲಿ ತಲ್ಲೀನನಾಗಿಬಿಟ್ಟೆ...

           "ಅಂಕಲ್ ನಿಮಗೆ ನಿಮ್ಮ ಕಾಲೇಜಿನ ದಿನಗಳು ನೆನಪಿದೆಯೇ ? ಆಗ ನೀವು ನಿಮ್ಮ ಸ್ನೇಹಿತರೆಲ್ಲಾ ಸೇರಿ ಒಂದು ಗ್ರೂಪ್ ಮಾಡ್ಕೊಂಡಿದ್ರಿ.. ಅದಕ್ಕೆ ಇಬ್ಬರು ಲೀಡರ್ ಕೂಡ ಸೆಲೆಕ್ಟ್ ಮಾಡ್ಕೊಂಡಿದ್ರಿ . ಒಬ್ಬರು ಹುಡುಗರ ಲೀಡರ್ & ಮತ್ತೊಬ್ಬರು ಹುಡುಗಿಯರ ಲೀಡರ್ .. ಆ ಹುಡುಗರ ಲೀಡರ್ ನೀವೇ & ಹುಡುಗಿಯರ ಲೀಡರ್ ಹೆಸರು ಸ್ವಪ್ನ .. ನಿಮಗೆ ಸ್ವಪ್ನ ಅವರ ನೆನಪು ಇದೆಯಾ .." ಆಗ ನಾನು ತಕ್ಷಣ ಏನನ್ನೋ ಹುಡುಕುತ್ತಿರುವವನಂತೆ ಮನದಲ್ಲಿ ವಿಶೇಷ ಆಲೋಚನೆಗಳು ಮೂಡಿದಂತೆ , ಮಂದವಾಗಿ ಬೆಳಕೊಂದು ಮೂಡಿ , ಅದರಲ್ಲಿ ಸ್ವಪ್ನಳ ಪ್ರತಿಬಿಂಬವು ಕಂಡಂತೆ ಭಾಸವಾಗಿ ನಾನು "ಹೌದೌದು ಸ್ವಲ್ಪ ಸ್ವಲ್ಪ ನೆನಪಿಗೆ ಬರ್ತಾ ಇದೆ. ಅವಳಿಗೆ ವೈಟ್ ಕಲರ್ ಡ್ರೆಸ್ ಅಂದ್ರೆ ತುಂಬಾ ಇಷ್ಟ ಇತ್ತು .. ಅವಳೇನಾ ನೀನು ಹೇಳ್ತಾ ಇರುವಾ ಸ್ವಪ್ನ.."

             ಅವಳು ಸಹ ಸ್ವಲ್ಪ ಯೋಚನೆ ಮಾಡುತ್ತಾ ಕಿಟಕಿಯ ಬಳಿಯಿಂದ ಬಂದು ಚೇರಿನಲ್ಲಿ ಕೂತಳು .. ಹಾಗೆಯೇ ಕಾಫಿಯ ಕಪ್ ಅನ್ನು ಟೀಪಾಯಿ ಮೇಲೆ ಇಟ್ಟಳು .. ನೋಡಿದಾಗ ಅದು ಖಾಲಿ ಇತ್ತು .. ಅವಳು ಮಾತನಾಡುತ್ತಲೇ ಕಾಫಿಯನ್ನು ಸಹ ಕುಡಿದು ಮುಗಿಸಿದ್ದಳು .. ಆದರೆ ನಾನು ಮೈಮರೆತ ಕಾರಣ ನನ್ನ ಕಪ್ ಅಲ್ಲಿ ಇನ್ನೂ ಸ್ವಲ್ಪ ಕಾಫಿ ಹಾಗೆಯೇ ಉಳಿದಿತ್ತು .. ಅದನ್ನು ಕಂಡು ತಣ್ಣಗಾಗುವುದೆಂದು ಬೇಗಬೇಗನೇ ನಾನು ಕಾಫಿಯನ್ನು ಕುಡಿದು ಮುಗಿಸಿ , ನನ್ನ ಕಪ್ ಅನ್ನು ಸಹ ಟೀಪಾಯಿ ಮೇಲೆ ಇಟ್ಟೆ. ಅಷ್ಟರಲ್ಲಿ ಅವಳಿಗೆ ಅದೇನೋ ನೆನಪಾದಂತೆ ತಕ್ಷಣ "ಹಾ ಹಾ ಅಂಕಲ್ ನಿಮ್ಮ ಮಾತು ನಿಜ.. ಬಿಳಿ ಬಣ್ಣದ ಬಟ್ಟೆಗಳು ಅಂದ್ರೆ ತುಂಬಾನೇ ಇಷ್ಟ.. ಮತ್ತೆ ನಿಮ್ಮ ಗಿಫ್ಟ್ ಕೂಡ ಇನ್ನೂ ಜೋಪಾನವಾಗಿ ಇಟ್ಟಿದ್ದಾರೆ .. ನೀವು ಕೊಟ್ಟಿದ್ದ ಬಿಳಿ ಬಣ್ಣದ ವಾಚ್ ಈಗಲೂ ಕೇವಲ ಮುಖ್ಯವಾದ ಸಮಾರಂಭಗಳಲ್ಲಿ ಮಾತ್ರ ಹಾಕೊಳ್ತಾರೆ.. ಇನ್ನೂ ನಿಮ್ಮ ವಿಷಯ ತುಂಬಾ ಮಾತಾಡ್ತಾರೆ." ಇದನ್ನೆಲ್ಲಾ ಕೇಳುವಾಗ ನಾನು ಸುಮ್ಮನಿರದೇ ಅವಳನ್ನು ಕೇಳಿದೆ "ಸ್ವಪ್ನ ನಿನಗೆ ಹೇಗೆ ಗೊತ್ತು ಕವನ.. ನೀನು ಸ್ವಪ್ನ ಮಗಳ ಹಾಗಿದ್ರೆ.. ನಿನ್ನ ಮತ್ತು ಸ್ವಪ್ನಳ ಪರಿಚಯ ಏನು , ಹೇಗೆ .. ಸ್ವಪ್ನ ಈಗ ಎಲ್ಲಿದ್ದಾಳೆ , ಹೇಗಿದ್ದಾಳೆ.. ? " ಮಾತಿನ ನಡುವಲ್ಲಿ ನನ್ನ ಪ್ರಶ್ನೆಗಳು ಅವಳ ಮುಖದಲ್ಲಿ ಆಶ್ಚರ್ಯ ಮೂಡಿಸಿದವು .. ಅವಳು ಒಂದರ್ಧ ನಿಮಿಷ ಮೌನವಾಗಿ ಚಿಂತಿಸುತ್ತಾ ಮಾತು ಮುಂದುವರೆಸಿದಳು .

             "ಎಲ್ಲಾ ವಿವರವಾಗಿ ಹೇಳ್ತೀನಿ ಅಂಕಲ್ .. ಆದರೆ ನೀವು ತಿಳಿದುಕೊಂಡಂತೆ ನಾನು ಸ್ವಪ್ನ ಅವರ ಮಗಳು ಅಲ್ಲಾ .. ಆದರೂ ಮಗಳಿನ ತರಹಾನೇ.. ಸ್ವಪ್ನ ಅವರು ನಮ್ಮ ಪಕ್ಕದ ಮನೆಯವರು .. ಹಾಗೆಯೇ ಸ್ವಲ್ಪ ದಿನಗಳು ಆದ ಮೇಲೆ ಗೊತಾಗಿದ್ದು , ಅವರು ನಮ್ಮ ದೂರದ ಸಂಬಂಧಿಗಳು ಅಂತಾ.. ಸ್ವಪ್ನ ಅವರು ಸಂಬಂಧದಲ್ಲಿ ನನ್ನ ಅಕ್ಕ.. ಅವರು ವಿಷಯ ಗೊತ್ತಾದಾಗ ಒಂದು ವಿಚಾರ ತಿಳೀತು.. ನಮ್ಮ ಮತ್ತು ಅವರ ಮನೆಯವರಲ್ಲಿ ತುಂಬಾ ವರ್ಷಗಳ ಹಿಂದೆಯೇ ಆಸ್ತಿ ಜಗಳ ಹುಟ್ಟಿಕೊಂಡು , ಎಲ್ಲಾ ದೂರ ದೂರ ಆಗಿದ್ದು .. ಆದರೆ ಅದಾದ ನಂತರ ಆ ಮನೆಯವರಲ್ಲಿ ಯಾರನ್ನೂ ಸಹ ಮಾತನಾಡಿಸುವ ಅವಕಾಶ ಇರಲಿಲ್ಲ ಮತ್ತು ಅದಕ್ಕೆ ಒಪ್ಪಿಗೆಯೂ ಕೊಡ್ತಾ ಇರಲಿಲ್ಲ.. ಹಾಗೆಯೇ ಕೆಲಸ ಕಾರ್ಯ ಅಂತಾ ಒಬ್ಬೊಬ್ಬರೇ ಊರು ಬಿಟ್ಟು ಊರು ಬದಲಾಗುತ್ತಾ ಎಲ್ಲಾ ದೂರ ದೂರ ಆಗಿ, ಹೆಚ್ಚಾಗಿ ಎಲ್ಲರ ಸಂಪರ್ಕವೂ ತಪ್ಪಿ ಹೋಗಿ ಈಗ ನಾವಷ್ಟೇ ನಮ್ಮೂರಲ್ಲಿ ಮತ್ತು ನಮ್ಮ ಹಿರಿಯರ ಬಗ್ಗೆ, ನಮ್ಮ ವಂಶ , ಅಜ್ಜ ಅಜ್ಜಿ , ಮುತ್ತಜ್ಜ , ಮುತ್ತಜ್ಜಿ .. ಯಾರು ಏನು ಅನ್ನೋದೆಲ್ಲಾ ಇದುವರೆಗೂ ಗೊತ್ತೇ ಇರಲಿಲ್ಲ.. ಪಕ್ಕದ ಮನೆ ಅಕ್ಕ ಅವರು ಕಥೆಗಳನ್ನು ತುಂಬಾ ಚೆಂದ ಹೇಳ್ತಾರೆ ಅಂತಾ ಅವರ ಕಥೆ ಕೇಳೋಕ್ಕೆ ಮತ್ತೆ ಸುಮ್ಮನೆ ಕಾಲ ಕಳೆಯೊಕ್ಕೆ , ಅವರ ಜೊತೆ ಮಾತಾಡೋಕ್ಕೆ ಹೋಗ್ತಾ ಇದ್ದೆ.. ಆಗ ಮಾತು ಮಾತಿನಲ್ಲೇ ಸ್ವಪ್ನ ಅಕ್ಕ ಅವರು ಕೂಡ ನಮ್ಮ ರಿಲೇಟಿವ್ ಅನ್ನೋದು ತಿಳೀತು.. ಆದರೆ ಹೆಚ್ಚಾಗಿ ಪಕ್ಕದ ಮನೆಯ ಅಕ್ಕ ಅಂತಾನೇ ನಾನು ಮೊದಲಿಂದಾನೂ ಇಷ್ಟಪಟ್ಟಿರೋ ಕಾರಣ ಅವರನ್ನು ಈಗಲೂ ಹಾಗೆಯೇ ತಿಳ್ಕೊಂಡಿರೋದು.. ಅವರು ಸಹ ನನ್ನನ್ನು ಮಗಳಿನ ಹಾಗೆಯೇ ತಿಳ್ಕೊಂಡಿದ್ದಾರೆ .. ಮನೆ ಕೆಲಸ , ಅಡುಗೆ ಮಾಡೋದು ಎಲ್ಲಾ ಕಲಿಸಿಕೊಡ್ತಾರೆ .. ಡ್ರಾಯಿಂಗ್ , ಪೇಂಟಿಂಗ್ , ಡ್ಯಾನ್ಸ್ ಇನ್ನೂ ತುಂಬಾ ವಿಷಯಗಳನ್ನು ಹೇಳಿ ಕೊಡ್ತಾರೆ.. ಆಗಾಗ ಕಾಲೇಜು ಸಬ್ಜೆಕ್ಟ್ ಅಲ್ಲೂ ಸಹ ನೋಟ್ಸ್ ಬರಿಯೋಕ್ಕೆ ಹೆಲ್ಪ್ ಕೂಡ ಮಾಡ್ತಾರೆ.. ಸ್ವಪ್ನ ಅಕ್ಕ ಅವರು ನನಗೆ ತುಂಬಾ ತುಂಬಾ ಇಷ್ಟ......"


                          ಹೋ ಹೋ ಕವನ ಮಾತುಗಳನ್ನು ಕೇಳ್ತಾ ಇದ್ದಾಗ ನನ್ನ ಕಾಲೇಜು ದಿನಗಳು ತಲೆಯಲ್ಲಿ ಸುತ್ತುತ್ತ ಸುತ್ತುತ್ತ , ಎಲ್ಲೆಲ್ಲಿ ನೋಡಿದರೂ ಸ್ವಪ್ನ ಕಾಣಿಸುವಂತೆ ಭಾಸವಾಗುತ್ತಿತ್ತು.. ಕವನಳ ಇಷ್ಟುದ್ದ ಮಾತುಗಳು ಮತ್ತು ಇನ್ನೂ ಸಹ ಅವಳ ಮಾತುಗಳು ಮುಗಿದಿರಲಿಲ್ಲ .. ಕವನ ಅವಳ ಮಾತುಗಳಲ್ಲಿ ಸ್ವಪ್ನಳ ಗುಣಗಾನ ಮಾಡುತ್ತಿದ್ದಳು .. ಸ್ವಪ್ನಳ ಹೆಲ್ಪಿಂಗ್ ನೇಚರ್ ಆ ರೀತಿ ಇತ್ತು .. ಅವಳು ಎಲ್ಲರಿಗೂ ಸಹಾಯ ಮಾಡುವ ಸ್ವಭಾವದವಳು .. ಹಾಗೂ ಸ್ವಪ್ನ ಎಲ್ಲರ ಜೊತೆಯಲ್ಲೂ ಬಹು ಬೇಗನೇ ಹೊಂದಿಕೊಳ್ಳುತ್ತಿದ್ದಳು.. ಇದೇ ಕಾರಣ ಅವಳು ಹುಡುಗಿಯರ ಲೀಡರ್ ಆಗಿ ಆಯ್ಕೆ ಆಗಿದ್ದಳು .. ಹಾಗೆಯೇ ತುಂಬಾ ದಿನಗಳು ಆಗಿದ್ದವು ನಾನು ಸ್ವಪ್ನಳನ್ನು ನೆನಪಿಸಿಕೊಂಡು ಮತ್ತು ಈಗ ಸ್ವಪ್ನಳ ನೆನಪು , ಜೊತೆಯಲ್ಲಿ ಕವನ ಯಾರು ಎನ್ನುವುದು ಸಹ ತಿಳಿಯಿತು .. ಆದರೆ ಕವನ ನನ್ನ ಜೊತೆ ಮಾತಾಡಲು ಬಂದ ನಿಜವಾದ ವಿಷಯ ಯಾವುದು , ಅವಳು ಏನು ಹೇಳಬೇಕು ಅಂತಾ ಇಲ್ಲಿ ಬಂದಿದ್ದಾಳೆ .. ಅದ್ಯಾವುದೋ ಹಳೆಯ ಮನೆಯ ಹತ್ರ ಇರುವ ಕಾರು ತೋರಿಸಬೇಕು ಅಂತಾ ಹೇಳ್ತಿದ್ದಾಳೆ ... ಆ ಕಾರು ಯಾರದ್ದು .. ಅದನ್ನು ನಾನು ಏಕೆ ನೋಡಬೇಕು .. ಹೀಗೆ ಇನ್ನೂ ಹಲವಾರು ಪ್ರಶ್ನೆಗಳು ಮನದಲ್ಲೇ ಸರ್ಕಸ್ ಮಾಡಿಸುತ್ತಿತ್ತು ..

                               ಆದರೆ ಕವನ ಇನ್ನೂ ಸ್ವಪ್ನಳ ವಿಷಯದಲ್ಲೇ ಮಾತುಗಳನ್ನು ನಿಲ್ಲಿಸದಂತೆ ಹೇಳುತ್ತಲೇ ಇದ್ದಳು..ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದು ಯಾವಾಗ ? ಎನ್ನುವ ಚಿಂತನೆಯಲ್ಲಿಯೇ ನಾನು ಕವನಳನ್ನು ಮಾತನಾಡಿಸಲು ಇನ್ನೇನು ಕವನ ಎಂದು ಕೂಗುವಷ್ಟರಲ್ಲಿ , ನನ್ನ ಮೊಬೈಲ್ ರಿಂಗ್ ಆಯಿತು.. "ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಡಿಂಡಿಮ ಬಾರಿಸುವೆ .. ಎಂದೂ ಬರೆಯುವ ಬಾಳುವೆ.. ಕನ್ನಡ ಡಿಂಡಿಮ ಬಾರಿಸುವೆ .. ಎಂದೂ ಬರೆಯುವ ಬಾಳುವೆ" .. ನಾನು ಮೊಬೈಲ್ ಅನ್ನು ಜೇಬಿನಿಂದ ಹೊರ ತೆಗೆಯುವುದನ್ನು ನೋಡಿದ ಕವನ ಅವಳ ಮಾತುಗಳನ್ನು ನಿಲ್ಲಿಸಿದಳು .. ನಾನು ಮೊಬೈಲ್ ಅಲ್ಲಿ ನೋಡಿದಾಗ ಅದು ಪ್ರಿಯ ಮಾಡಿದ್ದ ಫೋನ್ .. ನಾನು ರಿಸೀವ್ ಮಾಡಿ " ಹಲೋ ಪ್ರಿಯ .. ಅಲ್ಲಿ ಮಳೆ ಕಡಿಮೆ ಆಗಿದೆಯಾ.. ಇಲ್ಲಿ ನಮ್ಮ ಮನೆ ಕಡೆ ಮಳೆ ಇನ್ನೂ ಸ್ವಲ್ಪ ಜೋರಾಗಿದೆ .. ನಾನು ಸ್ವಲ್ಪ ತಡವಾಗಿ ಬರ್ತೀನಿ" ಎಂದು ಹೇಳಿದೆ.. ಆದಕ್ಕೆ ಪ್ರಿಯ "ಸರಿ ಸರಿ ಆರಾಮಾಗಿ ಬಾ .. ರಿಸ್ಕ್ ಮಾಡ್ಕೋಬೇಡ .. ಮಳೆಯಲ್ಲಿ ನೆನಕೊಂಡು ಬರೋದು ಬೇಡ.... ಹಾಗೆಯೇ ನಿನ್ನ ಬುಕ್ ಕೂಡ ಎಲ್ಲೂ ಕಳೆಯೋಲ್ಲ.. ಮರೆತು ಮತ್ತೆಲ್ಲೋ ಇಡ್ತೀನಿ ಅನ್ನೋ ಭಯನೂ ಬೇಡ .. ನಾನು ನನ್ನ ಕೈಯಲ್ಲೇ ಹಿಡ್ಕೊಂಡಿರ್ತೀನಿ .. ನೀನು ಬರೋವರೆಗೂ .. ಆದರೆ ಈ ಬುಕ್ ಓದುತ್ತಾ ಇದ್ದೆ .. ಇದರಲ್ಲಿ ಕೆಲವು ಪೇಜಸ್ ಸರಿಯಾಗಿ ಕಾಣಿಸ್ತಾ ಇಲ್ಲಾ.. ಹಳೆಯದ್ದು ಅಲ್ವಾ ಅದಕ್ಕೆ ಕೆಲವು ಪೇಜಸ್ ಡಸ್ಟ್ ಆಗಿ , ಬರೆದಿರೋದು ಎಲ್ಲಾ ಕ್ಲೀನ್ ಆಗಿ ಕಾಣ್ತಾ ಇಲ್ಲಾ .. ಇದರಲ್ಲಿ ಸ್ವಪ್ನ ಅನ್ನುವ ಹುಡುಗಿಯ ಪರಿಚಯ ಮತ್ತು ಅವಳ ಎಷ್ಟೋ ಡೀಟೇಲ್ ಸ್ಟೋರೀನೆ ಇದೆ.. ಯಾರು ಸ್ವಪ್ನ ಅಂದ್ರೆ.." ಅಂತಾ ಪ್ರಿಯ ನನ್ನ ಕೇಳಿದಳು.. ಆಗ ಇಲ್ಲಿ ಕವನ ಇದುವರೆಗೂ ಹೇಳಿದ ಸ್ವಪ್ನಳ ಎಲ್ಲಾ ವಿಷಯವೂ ಮತ್ತೆ ಮತ್ತೆ ನೆನಪಾಗಿ ಕಾಡುವಂತೆ ಅನ್ನಿಸತೊಡಗಿತು.. ಹಾಗೆಯೇ ಅಲ್ಲಿ ಪ್ರಿಯ ಕೂಡ ಸ್ವಪ್ನಳ ಸುದ್ದಿಯನ್ನು ಕೇಳಿ , ನನ್ನ ಕುತೂಹಲಗಳನ್ನು ಮತ್ತಷ್ಟು ಹೆಚ್ಚಿಸಿದ್ದಳು .. ಆ ಪುಸ್ತಕದಲ್ಲಿ ಸ್ವಪ್ನಳ ಕುರಿತು ನಾನೇನು ಬರೆದಿದ್ದೆ ಎನ್ನುವುದನ್ನು ನೆನಪು ಮಾಡಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗಲಿಲ್ಲ.. ಆಗ ನಾನು ಫೋನಿನಲ್ಲಿ "ಪ್ರಿಯ ಸ್ವಪ್ನ ನನ್ನ ಕಾಲೇಜು ಫ್ರೆಂಡ್.. ನಾನು ಆಮೇಲೆ ಸ್ವಪ್ನಳ ವಿಷಯ ಎಲ್ಲಾ ಹೇಳ್ತೀನಿ.. ಸ್ವಲ್ಪ ಹೊತ್ತು ತಾಳು .. ಮಳೆ ನಿಂತ ಕೂಡಲೇ ಬರುವೆ.. ಎಲ್ಲಾ ಡೀಟೇಲ್ ಆಗಿ ಮಾತಾಡೋಣ." ಅಂತಾ ಹೇಳುವಷ್ಟರಲ್ಲಿ ಇಲ್ಲಿ ಕವನಳ ಮುಖದಲ್ಲೂ ಸಹ ಒಂದು ವಿಶೇಷ ಹೊಳಪು ಕಾಣಿಸುತ್ತಿತ್ತು .. ನಾನು ಯಾರೊಂದಿಗೆ ಫೋನ್ ಅಲ್ಲಿ ಮಾತಾಡುತ್ತಿರುವೆ.. ಯಾರಿಗೆ ಸ್ವಪ್ನಳ ವಿಚಾರ ಹೇಳುತ್ತಿರುವೆ ಎಂದು ತಿಳಿಯುವ ಕಾತರವೂ ಸಹ ಕವನಳ ಮುಖದಲ್ಲಿ ಬಿಂಬಿಸುತ್ತಿತ್ತು.. ಹಾಗೆಯೇ ನಾನು ಕಿಟಕಿಯ ಹೊರಗೆ ಸ್ವಲ್ಪ ಕಣ್ಣಾಡಿಸುತ್ತಾ , ಮಳೆ ಕಡಿಮೆ ಆಗುತ್ತಿರುವುದನ್ನು ಕಂಡು , ಮನದಲ್ಲೇ ಖುಷಿಯಾಗಿ .. "ಪ್ರಿಯ ಈಗ ಇಲ್ಲಿ ಮಳೆಯೂ ಸಹ ಕಡಿಮೆ ಆಗುವಂತೆ ಕಾಣುತ್ತಿದೆ . ನಾನು ಮಳೆ ನಿಂತ ತಕ್ಷಣ ಹೊರಟು ಬರುವೆ .. ನೀನು ಮನೆಯಲ್ಲಿಯೇ ಇರು .. ಎಲ್ಲೋ ಹೋಗಬೇಡ ಪ್ಲೀಸ್" ಎಂದು ಹೇಳಿದಾಗ .. ಆ ಕಡೆಯಿಂದ ಪ್ರಿಯ ಮಾತನಾಡಿದಳು "ಇಲ್ಲೂ ಸಹ ಮಳೆ ನಿಲ್ಲುವಂತೆ ಆನಿಸುತ್ತದೆ .. ನಾನು ಎಲ್ಲೂ ಹೋಗೋಲ್ಲಾ .. ನೀನು ಬರೋವರೆಗೂ ಇಲ್ಲೇ ಇರ್ತೀನಿ" ಅಂತಾ ಹೇಳಿದಳು .. ನಾನು ಸಹ "ಹಾ ಸರಿ ಪ್ರಿಯ ಟೆಕ್ ಕೇರ್" ಅಂತಾ ಹೇಳಿ ಫೋನ್ ಇಟ್ಟೆ.. ಸ್ವಲ್ಪ ಹೊತ್ತು ಮೌನವಾಗಿ ಕೂತು ಬಿಟ್ಟೆ ..

                  ಕವನ ಕೇಳಿದಳು "ಅಂಕಲ್ ಯಾರ ಜೊತೆ ನೀವು ಫೋನ್ ಅಲ್ಲಿ ಸ್ವಪ್ನ ಅಕ್ಕ ಅವರ ವಿಚಾರ ಮಾತಾಡಿದ್ದು .. ಪ್ರಿಯ ಅಂದ್ರೆ ಯಾರು ? ಅವರ ಮನೆ ಎಲ್ಲಿದೆ .. ನೀವು ಎಲ್ಲಿಗೆ ಹೋಗಬೇಕು ಈಗ .." ಅಂತೆಲ್ಲಾ ಕೇಳುತ್ತಾ ಸ್ವಲ್ಪ ಬೇಸರ ಆದವಳಂತೆ ಕೂತಳು.. ನಾನು ಅವಳನ್ನು ನೋಡುತ್ತಾ .. "ಯು ಡೋಂಟ್ ವರಿ ಕವನ.. ನಿನ್ನ ಜೊತೆ ಮಾತಾಡಿದ ನಂತರವೇ ನಾನು ಹೋಗೋದು .. ಪ್ರಿಯ ನನ್ನ ಫ್ರೆಂಡ್ .. ಅವಳ ಮನೆ ಇದೇ ಊರಲ್ಲೇ ಇರೋದು.. ಆದರೆ ನಿನ್ನ ಮಾತುಗಳನ್ನು ಕೇಳ್ತೀನಿ . ನೀನು ಇಲ್ಲಿಗೆ ಬಂದಿರೋ ಕೆಲಸ ಮುಗಿಯೋವರೆಗೂ ನಿನ್ನ ಜೊತೆಯಲ್ಲಿಯೇ ಇರ್ತೀನಿ.. ನೀನು ಅದರ ಚಿಂತೆ ಬಿಡು.. ನಿನಗೀಗ ಏನು ಕೆಲಸ ಆಗಬೇಕು ಹೇಳು" ಅಂತಾ ಕೇಳಿದೆ.. ಆಗ ಕವನ ಪುನಃ ತನ್ನ ಮಾತುಗಳನ್ನು ಮುಂದುವರೆಸಿದಳು .. ಈಗ ಅವಳು ಈ ಊರಿಗೆ ಬಂದಿರುವ ಉದ್ದೇಶ ಮತ್ತು ಆಗಬೇಕಿರುವ ಕೆಲವು ಕೆಲಸ ಕಾರ್ಯಗಳ ವಿಚಾರ ಹೇಳಲು ಆರಂಭಿಸಿದಳು ......
(ಮುಂದುವರೆಯುವುದು .... )

No comments:

Post a Comment